ನನ್ನ ಬೌಲಿಂಗ್‌ಗೆ ಗಂಭೀರ್ ಹೆದರುತ್ತಿದ್ರು ಎಂದ ಪಾಕ್ ಬೌಲರ್..!

Vijayavani

Vijayavani

Author 2019-10-07 18:10:21

img

ನವದೆಹಲಿ: ಸದ್ಯ ಲೋಕಸಭಾ ಸದಸ್ಯರಾಗಿ ಬಿಜೆಪಿಯಿಂದ ಚುನಾಯಿತರಾದ ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ 2016ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್​ಗೆ ಸಂಪೂರ್ಣವಾಗಿ ವಿದಾಯ ಹೇಳಿದ್ದಾರೆ. ಅದಕ್ಕೂ ಮೊದಲು 2013ರಲ್ಲಿ ಏಕದಿನ ಹಾಗೂ ಟಿ-20 ಪಂದ್ಯಾವಳಿಗಳಿಂದ ನಿವೃತ್ತಿ ತೆಗೆದುಕೊಂಡಿದ್ದು. 2013ರಲ್ಲಿ ಇಂಗ್ಲೆಂಡ್​ ವಿರುದ್ಧ ಆಡಿದ ಏಕದಿನ ಪಂದ್ಯವೇ ಕೊನೆಯಾಗಿತ್ತು.

ಹೀಗೆ ಗೌತಮ್​ ಗಂಭೀರ್​ ಅವರು ಏಕದಿನ ಮತ್ತು ಟಿ-20 ಪಂದ್ಯಾವಳಿಗಳನ್ನು ಸಂಪೂರ್ಣವಾಗಿ ತೊರೆಯಲು ತಾನೇ ಕಾರಣ ಎಂದು ಪಾಕಿಸ್ತಾನಿ ವೇಗದ ಬೌಲರ್​ ಮೊಹಮ್ಮದ್​ ಇರ್ಫಾನ್​ ಹೇಳಿಕೊಂಡಿದ್ದಾರೆ..

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಗೌತಮ್​ ಗಂಭೀರ್​ ಅವರು ನನ್ನ ಬೌಲಿಂಗ್​ಗೆ ಹೆದರುತ್ತಿದ್ದರು. 2012-13ರಲ್ಲಿ ನಡೆದ ಇಂಡಿಯಾ-ಪಾಕಿಸ್ತಾನ ಪಂದ್ಯಾವಳಿ ವೇಳೆ ನಾನು ಹಾಕುವ ಬಾಲ್​ಗಳಿಗೆ ರನ್​ ಗಳಿಸಲು ಪರದಾಡುತ್ತಿದ್ದರು. ಅಷ್ಟೇ ಅಲ್ಲ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಗೌತಮ್​ ಗಂಭೀರ್​ಗೆ ಭಯವಾಗುತ್ತಿತ್ತು. ಅದೇ ಕೊನೆ, ಆಮೇಲೆ ತಂಡಕ್ಕೆ ಬರಲೇ ಇಲ್ಲ ಎಂದು ಮೊಹಮ್ಮದ್​ ಇರ್ಫಾನ್​ ತಿಳಿಸಿದ್ದಾರೆ.

ನಾನು ಬೌಲಿಂಗ್​ ಮಾಡುವ ರೀತಿಗೆ ಗಂಭೀರ್​ ಏನೇ ಪ್ರಯತ್ನ ಮಾಡಿದರೂ ಅದು ವರ್ಕ್​ ಆಗುತ್ತಿರಲಿಲ್ಲ. ಯಾರಿಗೆ ನಮ್ಮ ಬಗ್ಗೆ ಭಯವಿರುತ್ತದೆಯೋ ಅವರು ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ನಮ್ಮ ಎದುರು ಇರುವುದಿಲ್ಲ. ಗೌತಮ್​ ಗಂಭೀರ್​ ಕೂಡ ಅದನ್ನೇ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ ಭಾರತದ ಎಲ್ಲ ಆಟಗಾರರಿಗೂ ನನ್ನ ಬೌಲಿಂಗ್​ ಬಗ್ಗೆ ಆತಂಕವಿತ್ತು ಎಂದು ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

2012-13ರಲ್ಲಿ ಭಾರತ-ಪಾಕಿಸ್ತಾನ ನಡುವೆ ಎರಡು ಟಿ-20 ಪಂದ್ಯಗಳು ಹಾಗೂ ಮೂರು ಏಕದಿನ ಪಂದ್ಯಾವಳಿಗಳು ನಡೆದಿದ್ದವು. 2012ರ ಡಿಸೆಂಬರ್​ 28ರಂದು ಪಾಕ್​ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಆಡಿದ ಬಳಿಕ ಗೌತಮ್​ ಗಂಭೀರ್​ ಇನ್ನುಳಿದ ಯಾವುದೇ ಟಿ-20 ಪಂದ್ಯಾವಳಿಯನ್ನು ಆಡಲಿಲ್ಲ. ಅದೇ ಅವರ ಕೊನೆಯ ಪಂದ್ಯವಾಗಿದೆ.

READ SOURCE

Experience triple speed

Never miss the exciting moment of the game

DOWNLOAD