ಬಾಲಿವುಡ್ ನಟರೊಂದಿಗೆ ಫುಟ್ಬಾಲ್ ಆಡಿದ ಧೋನಿ

Kannada Prabha

Kannada Prabha

Author 2019-10-07 11:17:00

img

Source : Online Desk

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾನುವಾರ ಇಲ್ಲಿ ತಮ್ಮ ಬಾಲಿವುಡ್ ಗೆಳೆಯರೊಂದಿಗೆ ಫುಟ್ಬಾಲ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.

ನಟ ಅರ್ಜುನ್ ಕಪೂರ್ ಸಹಿತ ಬಾಲಿವುಡ್ ಕಲಾವಿದರ ಜೊತೆ ಧೋನಿ ಫುಟ್ಬಾಲ್ ಆಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

15 ದಿನಗಳ ಭಾರತೀಯ ಸೇನಾ ತರಬೇತಿಗಾಗಿ ಕಾಶ್ಮೀರಕ್ಕೆ ತೆರಳಿದ್ದ ದೋನಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದಿಂದ ತಾವಾಗಿಯೇ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಸರಣಿಗೂ ಧೋನಿ ಮರಳಿರಲಿಲ್ಲ. ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಹೊರಗುಳಿದ ಧೋನಿ ರಜೆ ವಿಸ್ತರಿಸಿದರು. ಡಿಸೆಂಬರ್ ನಲ್ಲಿ ಧೋನಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ.


READ SOURCE

Experience triple speed

Never miss the exciting moment of the game

DOWNLOAD