ವಿಜಯ್ ಹಜಾರೆ ಟ್ರೋಫಿ: ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಶತಕ

mykhel

mykhel

Author 2019-09-28 17:49:23

img

ಬೆಂಗಳೂರು, ಸೆಪ್ಟೆಂಬರ್ 28: ಟೀಮ್ ಇಂಡಿಯಾದಲ್ಲಿ ಆರಂಭಿರಾಗಿ ಬ್ಯಾಟಿಂಗ್‌ಗೆ ಇಳಿದು ಕೊಂಚ ಹಿನ್ನಡೆ ಅನುಭವಿಸಿದ್ದ ಕನ್ನಡಿಗ, ಕೆಎಲ್ ರಾಹುಲ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಪ್ರತಿನಿಧಿಸುತ್ತಿರುವ ರಾಹುಲ್, ಕೇರಳ ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ 4ನೇ ಸುತ್ತಿನ ಎಲೈಟ್ ಗ್ರೂಪ್ 'ಎ' ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆತಿಥೇಯ ಕರ್ನಾಟಕದಿಂದ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ 122 ಎಸೆತಗಳಿಗೆ 131 ರನ್ ಸಿಡಿಸಿದರು.

ಇನ್ನು ನಾಯಕ ಮನೀಷ್ ಪಾಂಡೆ 50 (51 ಎಸೆತ), ಪವನ್ ದೇಶಪಾಂಡೆ 17, ಶ್ರೇಯಸ್ ಗೋಪಾಲ್ 31, ಜಗದೀಶ ಸುಚಿತ್ 13, ಅಭಿಮನ್ಯು ಮಿಥುನ್ 12, ರೋನಿತ್ ಮೋರೆ 12 ರನ್‌ ಸೇರ್ಪಡೆಯೊಂದಿಗೆ ರಾಜ್ಯ ತಂಡ 49.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 294 ರನ್ ಪೇರಿಸಿದೆ.

ಕರ್ನಾಟಕ ಇನ್ನಿಂಗ್ಸ್‌ನಲ್ಲಿ ಕೇರಳದ ಸಂದೀಪ್ ವಾರಿಯರ್ 2, ಬಸಿಲ್ ಥಂಪಿ 3, ಕೆಎಂ ಆಸಿಫ್ 3, ವಿನೋದ್ ಮನೋಹರನ್ 2 ವಿಕೆಟ್ ಪಡೆದಿದ್ದಾರೆ. ಛತ್ತೀಸ್‌ಗಢ ಇನ್ನಿಂಗ್ಸ್‌ ಆಡುತ್ತಿದೆ. ಟೂರ್ನಿಯಲ್ಲಿ ಈ ಮೊದಲು ಆಡಿರುವ 2 ಪಂದ್ಯಗಳಲ್ಲಿ ಕರ್ನಾಟಕ, ಝಾರ್ಖಂಡ್‌ ವಿರುದ್ಧ ಮೊದಲ ಜಯ ದಾಖಲಿಸಿತ್ತು.

READ SOURCE

⚡️Fastest Live Score

Never miss any exciting cricket moment

OPEN