ಸತತ 7 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿದ ನಬಿ-ನಜೀಬುಲ್ಲಾ!

Vijayavani

Vijayavani

Author 2019-09-16 05:30:52

img

ಢಾಕಾ: ಅಫ್ಘಾನಿಸ್ತಾನದ ಮೊಹಮದ್ ನಬಿ (38ರನ್, 18 ಎಸೆತ, 4 ಸಿಕ್ಸರ್) ಮತ್ತು ನಜೀಬುಲ್ಲಾ ಜದ್ರಾನ್ (69*ರನ್, 30 ಎಸೆತ, 5 ಬೌಂಡರಿ, 6 ಸಿಕ್ಸರ್) ಟಿ20 ತ್ರಿಕೋನ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಸತತ 7 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನ ತಂಡ 28 ರನ್​ಗಳಿಂದ ಗೆಲುವು ದಾಖಲಿಸಿತು. ಇದು ಅಫ್ಘಾನಿಸ್ತಾನಕ್ಕೆ ಟಿ20 ಕ್ರಿಕೆಟ್​ನಲ್ಲಿ ಸತತ 11ನೇ ಗೆಲುವಾಗಿದ್ದು, ಆಸ್ಟ್ರೇಲಿಯಾದ ಸತತ 12 ಗೆಲುವಿನ ದಾಖಲೆ ಸರಿಗಟ್ಟುವ ಸನಿಹದಲ್ಲಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಫ್ಘನ್ ಇನಿಂಗ್ಸ್​ನ 17 ಮತ್ತು 18ನೇ ಓವರ್​ಗಳಲ್ಲಿ ನಬಿ-ನಜೀಬುಲ್ಲಾ ಜೋಡಿ ಈ ಸಾಧನೆ ಮಾಡಿತು. ಟೆಂಡೈ ಚಟಾರ ಎಸೆದ ಓವರ್​ನ ಕೊನೇ 4 ಎಸೆತಗಳಲ್ಲಿ ನಬಿ ಸಿಕ್ಸರ್ ಸಿಡಿಸಿದರೆ, ನೆವಿಲ್ ಮಡ್ಜಿವಾ ಎಸೆತದ ಮರುಓವರ್​ನ ಮೊದಲ 3 ಎಸೆತಗಳಲ್ಲಿ ನಜೀಬುಲ್ಲಾ ಸಿಕ್ಸರ್ ಸಿಡಿಸಿದರು. ಇವೆರಡು ಓವರ್​ಗಳಲ್ಲಿ ಒಟ್ಟಾರೆ 51 ರನ್ ದೋಚಿದ ಆಫ್ಘನ್ 5 ವಿಕೆಟ್​ಗೆ 197 ರನ್ ಪೇರಿಸಿತು. ಪ್ರತಿಯಾಗಿ ಜಿಂಬಾಬ್ವೆ 7 ವಿಕೆಟ್​ಗೆ 169 ರನ್ ಪೇರಿಸಲಷ್ಟೇ ಶಕ್ತವಾಯಿತು.

READ SOURCE

⚡️Fastest Live Score

Never miss any exciting cricket moment

OPEN