OMG: 867 ಓವರ್ ಬಳಿಕ ಮೊದಲ ನೋ ಬಾಲ್…!

Kannada Dunia

Kannada Dunia

Author 2019-09-17 23:46:00

img

ಕ್ರಿಕೆಟ್ ಎಂದ ಮೇಲೆ ಬೌಲರ್, ನೋಬಾಲ್ ಮಾಡುವುದು‌ ಸಹಜ. ಆದರೆ ಇಲ್ಲೊಬ್ಬ ಬೌಲರ್ ತನ್ನ ವೃತ್ತಿ ಜೀವನದ 867 ಓವರ್ ಬೌಲ್ ಮಾಡಿದ ಬಳಿಕ ಮೊದಲ ನೋ ಬಾಲ್ ಮಾಡಿದ್ದಾರೆ.

ಹೌದು, ಅಚ್ಚರಿಯಾದರೂ ಇದು ಸತ್ಯ.‌ ಈ ರೀತಿ ಕರಾರುವಾಕ್ಕಾಗಿ ಬೌಲ್ ಮಾಡಿರುವ ಬೌಲರ್ ಇಂಗ್ಲೆಂಡ್‌ ನ ಕ್ರಿಸ್ ವೋಕ್ಸ್. ಮೊದಲ‌ ನೋ ಬಾಲ್‌ನಲ್ಲಿಯೂ ವಿಕೆಟ್ ಪಡೆದಿದ್ದು, ನೋಬಾಲ್ ಆಗಿದ್ದರಿಂದ ನಾಟ್ ಔಟ್ ನೀಡಲಾಗಿದೆ.

ಆಷ್ಯಸ್ ಸರಣಿಯ ಅಂತಿಮ ಪಂದ್ಯದಲ್ಲಿ ಸಂಘಟಿತ ಪ್ರದರ್ಶನದಿಂದ ಗೆಲುವು ಸಾಧಿಸಿದರೂ, ಆಸ್ಟ್ರೇಲಿಯಾ ಸರಣಿ ಗೆಲುವು ಸಾಧಿಸಿದೆ. ಆದರೆ ಐದನೇ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರ ಬ್ಯಾಟಿಂಗ್ ವೇಳೆ, ವೋಕ್ಸ್ ಬೌಲಿಂಗ್‌ ವೇಳೆ ಬರ್ನ್ಸ್ ಕ್ಯಾಚ್ ಹಿಡಿದಿದ್ದರು. ಆದರೆ, ನೋಬಾಲ್ ಆಗಿದ್ದರಿಂದ ನಾಟ್‌ ಔಟ್ ಎಂದು ಅಂಪೈರ್ ಘೋಷಿಸಿದರು.

ಇಷ್ಟಾದರೂ ಸ್ಟುವರ್ಟ್ ಬ್ರಾಡ್ ನಾಲ್ಕು ವಿಕೆಟ್ ಪಡೆದಿದ್ದರಿಂದ ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಸುಲಭ ಜಯಗಳಿಸಿದೆ. ಆದರೆ ಸರಣಿಯನ್ನು ಆಸ್ಟ್ರೇಲಿಯಾ 3-1 ಅಂತರದಲ್ಲಿ ಗೆಲುವು ಸಾಧಿಸಿದೆ‌.

AddThis Sharing Buttons

READ SOURCE

Experience triple speed

Never miss the exciting moment of the game

DOWNLOAD